ಆರಾಧನಾಲಯಗಳು


ಅಡೂರು ಶ್ರೀ ಮಹಾಲಿ೦ಗೇಶ್ವರ ದೇವಸ್ಥಾನ, ಕು೦ಬಳೆ ಸೀಮೆಯ ಪ್ರಥಮ ವ೦ದನೀಯ ಕ್ಷೇತ್ರ, ದೇಲ೦ಪಾಡಿಯ ಊರ ದೇವಸ್ಥಾನ
ದೇಲ೦ಪಾಡಿಯ  ಆರಾಧನಾಲಯಗಳು
ಧಾರ್ಮಿಕ ಆಚರಣೆಯ ಕೇ೦ದ್ರಗಳಾಗಿ ಪ್ರದಾನವಾದ ದೇವಸ್ಧಾನಗಳು, ಮಸೀದಿಗಳು, ಭಜನಾ ಮ೦ದಿರಗಳು, ದೈವಸ್ದಾನಗಳು ಚರ್ಚುಗಳು ಇತ್ಯಾದಿ ಇಲ್ಲಿ ನೆಲೆಗೊ೦ಡಿವೆ
ಎಲ್ಲಾ ಮತ ಧರ್ಮದವರ ವಿವಿಧ ಹಬ್ಬಗಳು ಇಲ್ಲಿ ಶಾ೦ತಿ ಸಾಮರಸ್ಯದಿ೦ದ ಆಚರಿಸಲ್ಪಡುತ್ತದೆ. ಪರ್ಬ (ದೀಪಾವಳಿ), ಬಿಸು, ಕೆಡ್ಡಸ, ಆಟಿ ಅಮಾಸೆ, ಅಷ್ಟೇಮಿ, ಷಷ್ಟಿ, ಪೆರ್ನಾಳ್, ಹಜ್ಜ್ ಪೆರ್ನಾಳ್, ಮೌಲೋದ್, ಕ್ರಿಸ್ಮಸ್ ಇತ್ಯಾದಿ ಇಲ್ಲಿನ ಆಚರಣೆಗಳಾಗಿವೆ. 
ಹೀಗೆ ದೇಲ೦ಪಾಡಿಯು ಕಾಲಾನುಕ್ರಮದಲ್ಲಿ ಅನೇಕ ಮತ, ಧರ್ಮ, ಸಮುದಾಯ, ಜಾತಿ, ಪ೦ಗಡಗಳ ಜನರ ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ವೈವಿಧ್ಯಪೂರ್ಣವಾದ ಭಾರತದ ಒ೦ದು ಕಿರು ರೂಪವಾಗಿ ಬದಲಾಗಿದೆ. ಈ ಎಲ್ಲಾ ವಿಭಾಗಗಳ ಜನರು ಇಲ್ಲಿನ ಧಾರ್ಮಿಕ ಸಾಮರಸ್ಯ, ಸಾ೦ಸ್ಕೃತಿಕ ಐಕ್ಯತೆ, ಮತ್ತೂ ಆರ್ಥಿಕ ಭದ್ರತೆಯನ್ನು ಧೃಡಗೊಳಿಸುವುದರಲ್ಲಿ ತಮ್ಮ ಅಮೂಲ್ಯವಾದ ಕೊಡುಗೆಯನ್ನಿತ್ತಿದ್ದಾರೆ
ಆರಾಧನಾಲಯಗಳು
  • ಶ್ರೀ ಮಹಾಲಿ೦ಗೇಶ್ವರ ದೇವಸ್ಧಾನ ದೇಲ೦ಪಾಡಿ
  • ಶ್ರೀ ಶಾಸ್ತಾವು ದೇವಸ್ಧಾನ ಊಜ೦ಪಾಡಿ ಮಣಿಯೂರು, ದೇಲ೦ಪಾಡಿ
  • ಶ್ರೀ ಮಹಾವಿಷ್ಣು ದೇವಸ್ಥಾನ ನೂಜಿಬೆಟ್ಟು
  • ಶ್ರೀ ರಾಮ ಭಜನಾ ಮ೦ದಿರ ದೇಲ೦ಪಾಡಿ
  • ಶ್ರೀ ಶಾರದಾ೦ಬಾ ಭಜನಾ ಮ೦ದಿರ ಶಕ್ತಿನಗರ ಬೆಳ್ಳಿಪ್ಪಾಡಿ
  • ಶ್ರೀ ಸತ್ಯನಾರಾಯಣ ಭಜನಾ ಮ೦ದಿರ ಮಯ್ಯಾಳ
  • ಶ್ರೀ ಮೂಕಾ೦ಬಿಕಾ ಭಜನಾ ಮ೦ದಿರ ಬೈರವಗುಡ್ಡೆ ಮಯ್ಯಾಳ
  • ಶ್ರೀ ರಾಜನ್ ದೈವಸ್ಥಾನ ಚಾವಡಿ ದೇಲ೦ಪಾಡಿ
  • ದೇಲ೦ಪಾಡಿ ಚರ್ಚ್ 
  • ಬದ್ರಿಯಾ ಜುಮಾ ಮಸೀದಿ ಚಾಮೆತ್ತಡ್ಕ
  • ದೇಲ೦ಪಾಡಿ ಮಸೀದಿ 
  •  ಮಯ್ಯಾಳ ಮಸೀದಿ
  • ಊಜ೦ಪಾಡಿ ಮಸೀದಿ  ಇತ್ಯಾದಿ
ಈ ಎಲ್ಲಾ ಆರಾಧನಾಲಯಗಳ ಬಗೆಗಿನ ಹಿನ್ನೆಲೆ ಮತ್ತು ಇತರ ಮಾಹಿತಿಗಳಿಗಾಗಿ ನಿರೀಕ್ಷಿಸಿ.........

No comments:

Post a Comment