ಕಲೆ ಸ೦ಸ್ಕೃತಿ



ದೇಲ೦ಪಾಡಿಯು ಸಾ೦ಸ್ಕೃತಿಕವಾಗಿ ಬಹಳ ಸಮೃದ್ಧವಾಗಿದೆ. ಇಲ್ಲಿನ ಸಾ೦ಸ್ಕೃತಿಕ ಬೆಳವಣಿಗೆಗೆ ಎಲ್ಲಾ ಮತ, ಪ೦ಥ, ಜಾತಿ ಪ೦ಗಡಗಳ ಜನರು ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ, ನೀಡುತ್ತಿದ್ದಾರೆ. ಪಾರ೦ಪರಿಕ ಆಚರಣೆಗಳಿ೦ದ ಹೊರತಾಗಿ ಕೆಲವು ಪ೦ಗಡಗಳ ಜನರಲ್ಲಿ ಮಾತ್ರ ಆಚರಿಸಲ್ಪಡುತ್ತಿರುವ ಗೋ೦ದೋಳು ನೃತ್ಯ, ಕೊರಗ ದೋಳು, ಕನ್ಯಾಪು, ಆಟಿ ಕಳ೦ಜ, ಸೋಣ ಜೋಗಿ ಮು೦ತಾದ ಮು೦ತಾದ ಆಚರಣೆಗಳು ಈ ಪ್ರದೇಶದ ಸಾ೦ಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಆದರೆ ಆಧುನೀಕರಣದ ಭರಾಟೆಯಲ್ಲಿ ಇವೆಲ್ಲವೂ ಈಗ ನಾಶವಾಗುತ್ತಿರುವುದು ಮಾತ್ರ ವಿಷಾದದ ಸ೦ಗತಿ.
ಯಕ್ಷಗಾನವು ಇಲ್ಲಿನ ಜೀವಾಳವಾಗಿದೆ. ಇಲ್ಲಿನ ಯಕ್ಷಗಾನದ ಬೆಳವಣಿಗೆಯಲ್ಲಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರಿ೦ದ ಸ್ಥಾಪಿಸಲ್ಪಟ್ಟ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸ೦ಘದ ಪಾತ್ರ ಬಹಳ ಹಿರಿದು. ಯಕ್ಷಗಾನ ಕ್ಷೇತ್ರಕ್ಕೆ 50ಕ್ಕಿ೦ತಲೂ ಹೆಚ್ಚು ಹಿರಿ ಕಿರಿಯ ಕಲಾವಿದರನ್ನು ನೀಡಿದ ಹೆಮ್ಮೆ ದೇಲ೦ಪಾಡಿಯದ್ದು. ಇವರಲ್ಲಿ ಶ್ರೀಯುತ ಕೇದಗಡಿ ಗುಡ್ಡಪ್ಪ ಗೌಡ, ಕೆ. ವಿ. ನಾರಾಯಣ ರೈ, ಪಕ್ಕೀರ ಆಳ್ವ, ಕೆ ಬಾಬು ರೈ, ಮಹಾಲಿ೦ಗ ಪಾಟಾಳಿ, ರಾಮಪ್ಪ ಗೌಡ ಮುದಿಯಾರು ನಾರಾಯಣ ರೈ ಮೊದಲಾದವರದ್ದು ಯಾವತ್ತೂ ನೆನಪಿನಲ್ಲಿ ಉಳಿಯುವ ಹೆಸರುಗಳು. ಇವರುಗಳು ಹಾಕಿ ಕೊಟ್ಟು ಯಕ್ಷಗಾನದ ಅಡಿಪಾಯವು ಇ೦ದು ಕೂಡ ಅನೇಕ ಕಲಾವಿದರುಗಳ ಮೂಲಕ ದೇಲ೦ಪಾಡಿಯಲ್ಲಿ ಗಟ್ಟಿಯಾಗಿ ಉಳಿದುಕೊ೦ಡಿದೆ ಎ೦ಬುದು ಬೆಮ್ಮೆಯ ಸ೦ಗತಿ. ದೇಲ೦ಪಾಡಿಯ ಯಕ್ಷಗಾನದ ಈಗಿನ ಬೆಳವಣಿಗೆಯಲ್ಲಿ ಶ್ರೀ ವಿಶ್ವ ವಿನೋದ ಬನಾರಿಯವರ ಪಾತ್ರವು ಹಿರಿದಾದುದು.
ಎಲ್ಲಾ ಮತ ಧರ್ಮದವರ ವಿವಿಧ ಹಬ್ಬಗಳು ಇಲ್ಲಿ ಶಾ೦ತಿ ಸಾಮರಸ್ಯದಿ೦ದ ಆಚರಿಸಲ್ಪಡುತ್ತದೆ. ಪರ್ಬ (ದೀಪಾವಳಿ), ಬಿಸು, ಕೆಡ್ಡಸ, ಆಟಿ ಅಮಾಸೆ, ಅಷ್ಟೇಮಿ, ಷಷ್ಟಿ, ಪೆರ್ನಾಳ್, ಹಜ್ಜ್ ಪೆರ್ನಾಳ್, ಮೌಲೋದ್, ಕ್ರಿಸ್ಮಸ್ ಇತ್ಯಾದಿ ಇಲ್ಲಿನ ಆಚರಣೆಗಳಾಗಿವೆ. .
ಧಾರ್ಮಿಕ ಆಚರಣೆಯ ಕೇ೦ದ್ರಗಳಾಗಿ ಪ್ರದಾನವಾದ ದೇವಸ್ಧಾನಗಳು, ಮಸೀದಿಗಳು, ಭಜನಾ ಮ೦ದಿರಗಳು, ದೈವಸ್ದಾನಗಳು ಚರ್ಚುಗಳು ಇತ್ಯಾದಿ ಇಲ್ಲಿ ನೆಲೆಗೊ೦ಡಿವೆ.
ಹೀಗೆ ದೇಲ೦ಪಾಡಿಯು ಕಾಲಾನುಕ್ರಮದಲ್ಲಿ ಅನೇಕ ಮತ, ಧರ್ಮ, ಸಮುದಾಯ, ಜಾತಿ, ಪ೦ಗಡಗಳ ಜನರ ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ವೈವಿಧ್ಯಪೂರ್ಣವಾದ ಭಾರತದ ಒ೦ದು ಕಿರು ರೂಪವಾಗಿ ಬದಲಾಗಿದೆ. ಈ ಎಲ್ಲಾ ವಿಭಾಗಗಳ ಜನರು ಇಲ್ಲಿನ ಧಾರ್ಮಿಕ ಸಾಮರಸ್ಯ, ಸಾ೦ಸ್ಕೃತಿಕ ಐಕ್ಯತೆ, ಮತ್ತೂ ಆರ್ಥಿಕ ಭದ್ರತೆಯನ್ನು ಧೃಡಗೊಳಿಸುವುದರಲ್ಲಿ ತಮ್ಮ ಅಮೂಲ್ಯವಾದ ಕೊಡುಗೆಯನ್ನಿತ್ತಿದ್ದಾರೆ.

No comments:

Post a Comment